ಮನ್ನಾರ್
ಭಾರತ ಮತ್ತು ಶ್ರೀಲಂಕಾ ನಡುವೆ ಹಿಂದೂಸಾಗರಕ್ಕೆ ಸೇರಿದಂತಿರುವ ಒಂದು ಖಾರಿ. ಭಾರತದ ದಕ್ಷಿಣದಲ್ಲಿರುವ ತಮಿಳುನಾಡಿನ ಆಗ್ನೇಯ ಹಾಗೂ ದಕ್ಷಿಣ ದಿಕ್ಕಿನಲ್ಲೂ ಮತ್ತು ಶ್ರೀಲಂಕಾದ ವಾಯುವ್ಯ ದಿಕ್ಕಿನಲ್ಲೂ ಉ.ಅ.90 03' ಪೂ 790 50' ನಲ್ಲಿದೆ. ಇದರ ಅಗಲ 130 ಕಿ.ಮೀ.ನಿಂದ 275 ಕಿ.ಮೀ. ಉದ್ದ 161 ಕಿಮೀ ಖಾರಿಯ ಈಶಾನ್ಯಕ್ಕೆ ರಾಮೇಶ್ವರಮ್ ಪರ್ಯಾಯ ದ್ವೀಪವೂ ಆಡಮ್ಸ್ ಬ್ರಿಡ್ಜ್ ಎಂದು ಕರೆಯುವ ಮರಳು ದಿಬ್ಬಗಳು ಇವೆ. (ಶ್ರೀ ರಾಮಚಂದ್ರ ಕಟ್ಟಿದ ಸೇತುವೆಯ ಅವಶೇಷವೆಂದು ಇದನ್ನು ರಾಮ ಸೇತು ಎಂದು ಕರೆಯುತ್ತಾರೆ.) ಇವು ಶ್ರೀಲಂಕಾ ಕಡೆಗಿರುವ ಮನ್ನಾರ್ ದ್ವೀಪವನ್ನು ಸೇರಿಸುತ್ತವೆ. ಅಡಮ್ಸ್‍ಸ ಬ್ರಿಡ್ಜ್ ಸಾಲಿನಲ್ಲಿ ಅತಿಮುಖ್ಯವಾದುದು ಪಾಂಬನ್ ಬ್ರಿಡ್ಜ್. ಇದು ಹೆಚ್ಚು ಬಳಕೆಯಾಗುತ್ತಿದೆ. ಈ ದ್ವೀಪಗಳ ಸಾಲಿನಲ್ಲಿಯ ಧನುಷ್ಕೋಡಿಯಲ್ಲಿ ಭಾರತದ ದಕ್ಷಿಣ ರೈಲ್ವೆಯ ನಿಲ್ದಾಣವಿದೆ. ಇಲ್ಲಿಂದ ಶ್ರೀಲಂಕಾದ ತಲೈಮನ್ನಾರ್‍ಗೆ ಕೇವಲ 35 ಕಿ. ಮೀ ಹಿಂದೆ ಪ್ರವಾಸಿಗಳಿಗೆ ಮತ್ತು ಅಂಚೆ ರವಾನೆಗೆ ಭಾರತ ಹಾಗೂ ಶ್ರೀಲಂಕಾಕ್ಕೆ ಧನುಷ್ಕೋಡಿ ಮತ್ತು ತಲೈಮನ್ನಾರ್ ಮುಖ್ಯ ಸಂಪರ್ಕ ಕೇಂದ್ರಗಳಾಗಿದ್ದವು. ಈಗ ವಾಯುಯಾನದ ಸೌಕರ್ಯದಿಂದಾಗಿ ಇವು ಹಿಂದಿನ ಪ್ರಾಮುಖ್ಯ ಕಳೆದುಕೊಂಡಿವೆ. ಈ ಕೊಲ್ಲಿಗೆ ಹಲವಾರು ಸಣ್ಣನದಿಗಳೂ ತೊರೆಗಳು ಸೇರುತ್ತವೆ. ಅವುಗಳಲ್ಲಿ ಭಾರತದ ತಾಮ್ರಪರ್ಣಿ ಮತ್ತು ಶ್ರೀಲಂಕಾದ ಅರುವಿನ ನದಿಗಳು ಮುಖ್ಯವಾದವು. ಶ್ರೀಲಂಕಾದ ಈ ಕೊಲ್ಲಿಯ ಭಾಗ ಬೆಲೆಬಾಳುವ ಮುತ್ತುಗಳಿಗೆ ಪ್ರಸಿದ್ಧ.

ಮನ್ನಾರ್ ದ್ವೀಪ : ಶ್ರೀಲಂಕಾದ ಉತ್ತರ ಪ್ರದೇಶದ ಆಡಳಿತಕ್ಕೆ ಸೇರಿವೆ. ಈ ದ್ವೀಪದ ವಿಸ್ತಿರ್ಣ ಸುಮಾರು 17 ಚ.ಕಿಮೀ. ಆಡಮ್ಸ್ ಸೇತುವೆಯ ಪೂರ್ವಭಾಗದ ಕೊನೆಯಲ್ಲಿದೆ ತೆಂಗಿಗೆ ಪ್ರಸಿದ್ಧ. ಪ್ರಕೃತಿ ಸೌಂದರ್ಯದ ನೆಲವೀಡು. ದ್ವೀಪದ ಆಗ್ನೇಯ ದಿಕ್ಕಿನಲ್ಲಿ ಮನ್ನಾರ್ ಬಂದರಿದೆ.
(ಜೆ.ಪಿ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ